Arbifalls is 4 km from Manipal.This small waterfall is created during monsoons. Tourists will come here to enjoy the weekend.
ಮುಂಗಾರು ಮಳೆ ಧರೆಗೆ ಮುತ್ತಿಡುತ್ತಿದ್ದಂತೆ ಪರಿಸರವೆಲ್ಲ ಹೊಚ್ಚ ಹೊಸ ಕಳೆ ಪಡೆಯುತ್ತಿದೆ. ಸೊರಗಿ ಹೋಗಿದ್ದ ಗಿಡ, ಮರಗಂಟಿಗಳು ಹಚ್ಚ ಹಸಿರಿನಿಂದ ನಳನಳಿಸುತ್ತಿದೆ. ನದಿ-ಕೆರೆಗಳು ಉಕ್ಕಿ ಹರಿಯುತ್ತಿವೆ. ಜಲಪಾತಗಳು ಕವಲೊಡೆದು ಧುಮ್ಮಿಕ್ಕಿ ಪ್ರವಾಸಿಗರನ್ನು ಕೈ ಬೀಸಿ ಕರೆಯುತ್ತಿವೆ.